ತ -ನ

  • ತಂಗುದಾಣ – ತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ.

  • ತಂಟೆ – ಗೋಜು, ಉಪದ್ರವ.

  • ತಂತ್ರ – ಉಪಾಯ  

  • ತ್ರಿಪದಿ-ಮೂರು ಸಾಲಿನ ಪದ್ಯ

  • ತ್ರಿಶಂಕು – ಇಕ್ಕಟ್ಟಿನಲ್ಲಿ ಸಿಲುಕಿದವ  

  • ತಕರಾರು – ಅಡ್ಡಿ, ಆಕ್ಷೇಪಣೆ

  • ತತ್ತ್ವ – ಸಿದ್ಧಾಂತ, ಸಾರಸತ್ವ

  • ತತ್ತರಿಸು – ನಡುಗು ಕಂಪಿಸು. 

  • ತತ್ರಾಣಿ – ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ.

  • ತದ್ರೂಪ – ಅದೇ ತರಹದ

  • ತನ್ಮಯತೆ-ಸಂಪೂರ್ಣವಾಗಿ ಮಗ್ನವಾಗುವುದು

  • ತಪ – ತಪಸ್ಸು, ಧ್ಯಾನ.

  • ತಪ್ಪುನೆಪ್ಪು – ತಪ್ಪು ಒಪ್ಪುಗಳು

  • ತಬ್ಬಿಬ್ಬಾಗು-ಕಕ್ಕಾಬಿಕ್ಕಿಯಾಗು, ದಿಗ್ಭ್ರಮೆಯಾಗು

  • ತರ್ಕ – ಆರು ದರ್ಶನಗಳಲ್ಲಿ ಒಂದು, ವಾದ

  • ತರಾತುರಿ – ಅವಸರ  

  • ತಲ್ಲಣ – ತಳಮಳ

  • ತಲುಪು – ಮುಟ್ಟು, ಸೇರು.

  • ತಲೆತಲಾಂತರ-ಬಹಳ ವರ್ಷಗಳಿಂದ

  • ತವಕ – ಆತುರ, ತರಾತುರಿ,ಕಾತರ

  • ತಸ್ಕರ   –  ಕಳ್ಳ

  • ತಹಬಂದಿ-ಹತೋಟಿ

  • ತಳ – ಕೆಳಭಾಗ, ಸಮತಟ್ಟಾದ ಪ್ರದೇಶ

  • ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ.

  • ತಾಣ – ಜಾಗ ಸ್ಥಾನ, ಸ್ಥಳ.

  • ತಾರಕ – ಎತ್ತರದ ಸ್ವರ

  • ತಾರೆ – ನಕ್ಷತ್ರ

  • ತಾಳ್ಮೆಗೆಡು : ಸಹನೆ ಕಳೆದುಕೊಳ್ಳು, ಕೋಪಕ್ಕೆ ಒಳಗಾಗು.

  • ತಿಮಿರ – ಕತ್ತಲೆ, ಅಜ್ಞಾನ.

  • ತಿರುಕ – ಭಿಕ್ಷುಕ

  • ತಿರುಳು – ಸತ್ವ, ಸಾರ.

  • ತಿರೋಹಿತ-ಮರೆಯಾಗು 

  • ತೀರ್ಪು – ನಿರ್ಣಯ, ತೀರ್ಮಾನ.

  • ತೀವ್ರ – ಹರಿತ, ರಭಸ

  • ತುಚ್ಛ – ಕೀಳು, ನೀಚ, ನಿಂದನೀಯ.

  • ತುರಂಗ-ಕುದುರೆ

  • ತುರ್ತು – ಜರೂರು, ಕೂಡಲೆ.

  • ತುರಾಯಿ – ಹಕ್ಕಿಗಳ ಜುಟ್ಟು

  • ತುರಿಕೆ – ನವೆ, ಕೆರೆತ.

  • ತೃಣ – ಹುಲ್ಲು; ಗರಿಕೆ.   

  • ತೆಂಕಣ-ದಕ್ಷಿಣ

  • ತೆರ – ರೀತಿ

  • ತೇಜೋವಧೆ-ಅವಮಾನ

  • ತೊಯ್ದು – ನೀರಿನಿಂದ ನೆನೆದು

  • ತೊರೆ – ಚಿಕ್ಕಹೊಳೆ,  ಬಿಡು

  • ತೊಳಗು – ಪ್ರಕಾಶಿಸು

  • ತೋಪು – ಮರಗಳ ಸಮೂಹ, ಮರಗಳ ಗುಂಪು

  • ದಂಗಾಗು – ಆಶ್ಚರ್ಯಪಡು

  • ದ್ಯೋತಕ-ಗುರುತು ,ಸಂಕೇತ

  • ದ್ರವ್ಯ – ಐಶ್ವರ್ಯ, ಸಂಪತ್ತು

  • ದ್ರೋಹ – ಕೇಡನ್ನೆಣಿಸು, ವಿಶ್ವಾಸಘಾತ

  • ದ್ವಾರ – ಬಾಗಿಲು 

  • ದ್ವಿಜ-ಬ್ರಾಹ್ಮಣ

  • ದಟ್ಟ – ಸಾಂದ್ರವಾದ, ಮಂದವಾದ.

  • ದಟ್ಟಿಕುಪ್ಪಸ – ಸೊಂಟಕ್ಕೆ ಕಟ್ಟುವ ವಸ್ತ್ರ

  • ದಣಿವು – ಆಯಾಸ  

  • ದನಗಾಹಿ-ದನಗಳನ್ನು ಕಾಯುವವನು

  • ದನುಜ-ರಾಕ್ಷಸ

  • ದರ್ಪ – ಅಹಂಕಾರ

  • ದರ್ಬಾರು – ಅಧಿಕಾರ ನಡೆಸುವಿಕೆ

  • ದರ್ಶನ – ಭೇಟಿ, ಕಾಣುವಿಕೆ.

  • ದಾಪುಗಾಲು – ದೊಡ್ಡ ಹೆಜ್ಜೆ.

  • ದಾಯಾದಿ : ಅಣ್ಣತಮ್ಮಂದಿರ ಮಕ್ಕಳು.

  • ದಾರುಣ – ಭಯಂಕರ

  • ದಾಸ್ಯ – ಊಳಿಗ, ಅಧೀನತೆ

  • ದಿಕ್ಕಿಲ್ಲ-ಗತಿ ಇಲ್ಲದ, ಅನಾಥವಾದ;

  • ದಿಕ್ಸೂಚಿ – ದಿಕ್ಕನ್ನು ತಿಳಿಸುವ ಯಂತ್ರ.

  • ದಿಗ್ಗಜ   –  ಪ್ರಸಿದ್ಧ, ಹೆಸರಾಂತ;

  • ದಿಗ್ದರ್ಶಕ-ನಿರ್ದೇಶಕ, ಮಾರ್ಗದರ್ಶಕ

  • ದಿಗ್ಭ್ರಮೆ – ಆಶ್ಚರ್ಯ

  • ದಿಗಿಲು-ಭಯ

  • ದಿಟ್ಟಹೆಜ್ಜೆ-ಧೈರ್ಯದ ಹೆಜ್ಜೆ

  • ದಿಟ್ಟಿ-ದೃಷ್ಟಿ, ನೋಟ

  • ದಿಟ್ಟಿಸು – ನೋಡು

  • ದಿನ್ನೆ – ದಿಬ್ಬ, ಬೋರೆ, ತೆವರು.

  • ದಿನಪ  –  ಸೂರ್ಯ;  ರವಿ;  ಆದಿತ್ಯ.

  • ದಿವಿನಾಗು – ಮೈತುಂಬಿಕೊಳ್ಳು  

  • ದೀಕ್ಷೆ-ಶಪಥ

  • ದೀನತೆ – ಬಡತನ

  • ದುಂಬಾಲು – ಬೆನ್ನುಹತ್ತು ಹಿಂದೆ ಬೀಳು

  • ದುಗ್ಧಹಾಸ – ಹಾಲುನಗೆ; ಮುಗುಳ್ನಗೆ.

  • ದುಗುಡ – ವ್ಯಸನ ಚಿಂತೆ ಆತಂಕ.

  • ದುರ್ಗಮ – ಹೋಗಲು ಅಸಾಧ್ಯವಾದ.

  • ದುರ್ದೈವ – ಕೆಟ್ಟ ಅದೃಷ್ಟ ದೌರ್ಭಾಗ್ಯ.

  • ದುರ್ಭರ – ತಾಳಲಾಗದ

  • ದುರದೃಷ್ಟ – ಕೆಟ್ಟ ಅದೃಷ್ಟ.

  • ದುರಾಕ್ರಮಣ – ಮೋಸದ ಧಾಳಿ 

  • ದುರುಗುಟ್ಟು – ನೆಟ್ಟಕಣ್ಣಿನಿಂದ ನೋಡು, ದಿಟ್ಟಿಸಿ ನೋಡು.

  • ದುಸ್ತರ-  ಕಠಿಣ

  • ದೂರು – ನಿಂದಿಸು, ಆಪಾದನೆ.

  • ದೂಷಣೆ   –  ನಿಂದನೆ

  • ದೃಗುಜಲ-ಕಣ್ಣನೀರು

  • ದೃಷ್ಟಿಕೋನ – ನೋಡುವ ರೀತಿ

  • ದೇಣಿಗೆ – ಚಂದಾ; ವಂತಿಕೆ; ದಾನ.

  • ದೇದೀಪ್ಯ – ಪ್ರಕಾಶ

  • ದೌರ್ಜನ್ಯ – ದಬ್ಬಾಳಿಕೆ, ಹಿಂಸೆ.

  • ದೌರ್ಬಲ್ಯ – ಬಲಹೀನವಾದ.

  • ದೌಲತ್ತು – ಅಹಂಕಾರ ಅಧಿಕಾರದ ದರ್ಪ.

  • ಧ್ಯಾಸ – ನೆನಪು ಜ್ಞಾಪನ

  • ಧರೆ – ಭೂಮಿ  

  • ಧಾವಿಸು – ಓಡಿ ಬರುವುದು; ಅವಸರದಿಂದ ಬರುವುದು

  • ಧಿಕ್ಕರಿಸು-ತಿರಸ್ಕರಿಸು

  • ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ.

  • ಧುಮುಕು-ಸೇರು, ಭಾಗವಾಗು

  • ಧೂರ್ತ-ಮೋಸಗಾರ

  • ಧೃತಿ   –   ಧೈರ್ಯ

  • ಧೋತ್ರ-ಪಂಚೆ         

  • ನಂಜು – ವಿಷ   

  • ನಕ್ಷತ್ರ ಜಾರಿ – ರಾತ್ರಿ ಕಳೆದು

  • ನಚ್ಚು – ನಂಬು

  • ನತ್ತು – ಮೂಗುತಿ

  • ನಭ – ಆಕಾಶ, ಆಗಸ.

  • ನಮ್ರತೆ – ವಿನಯ ,ವಿಧೇಯ, ಬಾಗಿದ.

  • ನಯನ – ಕಣ್ಣು ಅಕ್ಷಿ ನೇತ್ರ.

  • ನರ್ತನ – ಕುಣಿತ

  • ನಸುಕು – ಬೆಳಗಿನ ಜಾವ.

  • ನಾಗಾಲೋಟ – ಅತಿವೇಗದ ಓಟ. 

  • ನಾಡು – ದೇಶ

  • ನಾವೆ – ದೋಣಿ

  • ನಿಗೂಢ – ರಹಸ್ಯ

  • ನಿಟ್ಟುಸಿರು-ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ.

  • ನಿತ್ಯ – ಪ್ರತಿ ದಿನ

  • ನಿಪುಣ – ಪರಿಣತಿ

  • ನಿಯತಿ – ವಿಧಿ ನಿಯಮ

  • ನಿರಂತರ – ಸದಾ; ಯಾವಾಗಲೂ,ಎಡೆಬಿಡದ, ಸತತವಾದ

  • ನಿರ್ದಿಷ್ಟ-ಗೊತ್ತುಪಡಿಸಿದ, ನಿಖರ

  • ನಿರ್ಭೀತ-ಭಯವಿಲ್ಲದ

  • ನಿರ್ಮತ್ಸರ – ದ್ವೇಷ ಇಲ್ಲದಿರುವುದು

  • ನಿರಾಶೆ-ಆಶಾಭಂಗ 

  • ನಿಲುವು – ಅಭಿಪ್ರಾಯ 

  • ನಿವಾರಣೆ  –  ದೂರಮಾಡು,  ಹೋಗಲಾಡಿಸು; 

  • ನಿಷ್ಕಾಮಸೇವೆ-ಯಾವ ಬಯಕೆಯೂ ಇಲ್ಲದೆ  ಮಾಡುವ ಉಪಕಾರ

  • ನಿಷ್ಣಾತ – ಪಾರಂಗತ

  • ನಿಷೇಧ – ನಿರಾಕರಣೆ

  • ನೀಗು-ಹೋಗಲಾಡಿಸು

  • ನೀಚ – ಕೆಟ್ಟ ಕೀಳಾದ. 

  • ನೀರೂರು – ಆಸೆ ಉಂಟಾಗು.

  • ನುಡಿ – ಭಾಷೆ, ಮಾತು

  • ನುಡಿಯ ಹೊಳೆ – ನಿರಂತರವಾಗಿ ಕೇಳಿ ಬರುವ ಮಾತು.

  • ನುಣುಚಿಕೋ – ತಪ್ಪಿಸಿಕೋ

  • ನೂತ್ನ – ನೂತನ; ಹೊಸ.   

  • ನೆಗೆ – ಹಾರು ಜಿಗಿ.

  • ನೆಚ್ಚು   –   ನಂಬು

  • ನೆತ್ತರು – ರಕ್ತ

  • ನೆತ್ತಿ – ತಲೆಯ ಮಧ್ಯಭಾಗ, ಹಣೆ

  • ನೆತ್ತಿಗೇರು – ಹೆಚ್ಚಾಗು

  • ನೆರೆ-ಸೇರು,  ಜೊತೆಗೂಡು,  ಒಟ್ಟುಗೂಡು, 

  • ನೆರೆಹಿ-ಜೋಡಿಸಿ 

  • ನೆವ  –  ಕಾರಣ,  ನೆಪ.

  • ನೇಗಿಲು – ಭೂಮಿಯನ್ನು ಉಳುವ ಸಾಧನ

  • ನೇತೃತ್ವ – ಮುಂದಾಳತ್ವ, ಹಿರಿತನ.

  • ನೇಸರ – ಸೂರ್ಯ