ಕ – ಙ

  • ಕಂಗಾಲಾಗು – ಕಂಗೆಡು, ತಬ್ಬಿಬ್ಬಾಗು, ಗಾಬರಿಗೊಳ್ಳು, ಏನೂ ತೋಚದಂತಾಗು, ದುರ್ಬಲವಾಗು

  • ಕಂಗು – ಅಡಿಕೆ

  • ಕಂಗೊಳಿಸು-ಶೋಭಿಸು

  • ಕಂಟಕ – ಕೇಡು, ವಿಪತ್ತು

  • ಕಂದ – ಗೆಡ್ಡೆ, ಮಗು

  • ಕಂದಾಚಾರ-ಗೊಡ್ಡು ಸಂಪ್ರದಾಯ

  • ಕಂದಿದ  –  ಮಸುಕಾದ 

  • ಕಂಬನಿ   –   ಕಣ್ಣೀರು

  • ಕ್ರಾಂತಿ-ಆಂದೋಲನ  

  • ಕ್ರಿಮಿನಾಶಕ-ಕ್ರಿಮಿಗಳನ್ನು ಕೊಲ್ಲುವ ಔಷಧಿ

  • ಕ್ರಿಮಿ-ಹುಳು

  • ಕ್ರೋಢೀಕರಣ – ಒಟ್ಟುಗೂಡಿಸುವಿಕೆ  

  • ಕ್ರೋಧ – ಕೋಪ, ಸಿಟ್ಟು

  • ಕ್ಲೇಶ – ದುಃಖ; ನೋವು 

  • ಕ್ಷಾತ್ರ – ಕ್ಷತ್ರಿಯ ಕುಲ, ಕ್ಷತ್ರಿಯನ ತೇಜಸ್ಸು

  • ಕ್ಷೀಣಿಸು-ಕುಗ್ಗು

  • ಕ್ಷೇಮಸಮಾಚಾರ – ಕುಶಲ, ಆರೋಗ್ಯ ಕುರಿತಾದ ವಿಷಯ

  • ಕ್ಷೋಭೆ  –  ತಳಮಳ

  • ಕಕ್ಕಾಬಿಕ್ಕಿ – ದಿಕ್ಕುತೋಚದಾಗು, ದಿಗ್ಭ್ರಮೆ, ತಬ್ಬಿಬ್ಬಾಗಿ

  • ಕಗ್ಗ-ಕೆಲಸಕ್ಕೆ ಬಾರದ

  • ಕಟ್ಟಳೆ – ನಿಯಮ

  • ಕಡಲು – ಸಮುದ್ರ  

  • ಕಡಿದಾಡು-ಜಗಳವಾಡು

  • ಕಡುಗಲಿ – ಮಹಾಶೂರ

  • ಕಡುಚತುರ – ಅತೀ ಬುದ್ಧಿವಂತಿಕೆ ಉಳ್ಳವನು.

  • ಕಣ್ಣಲ್ಲಿ ಎಣ್ಣೆ ಹಾಕಿಕೊಂಡು –   ಜಾಗರೂಕತೆಯಿಂದ ಎಚ್ಚರವಾಗಿರುವುದು.

  • ಕಣ್ಣುಮುಚ್ಚಿ ಕುಳಿತಿರು   –   ಮೈಮರೆತು ಇರುವುದು.

  • ಕಣಜ – ಧಾನ್ಯ ಸಂಗ್ರಹಣ ಸ್ಥಳ.

  • ಕತ್ತು – ಕೊರಳು

  • ಕದ – ಬಾಗಿಲು

  • ಕದಳಿ-ಬಾಳೆ

  • ಕಪಾಟು-ಬೀರು

  • ಕಬ್ಬಕ್ಕಿ -ಜಲಚರಗಳನ್ನು ತಿನ್ನುವ ಪಕ್ಷಿ 

  • ಕಮಾನು – ಅರ್ಧಚಂದ್ರಾಕೃತಿಯ ರಚನೆ.

  • ಕರ-ಕೈ 

  • ಕರಗ – ಒಂದು ಉತ್ಸವದ ಹೆಸರು.

  • ಕರಗು – ಸ್ಪಂದಿಸು

  • ಕರತಲಾಮಲಕ – ಅಂಗೈ ಮೇಲಿರುವ ನೆಲ್ಲಿಕಾಯಿಯಂತೆ ಸ್ಪಷ್ಟಗೋಚರ.

  • ಕರಾಳ – ಭಯಂಕರವಾದ

  • ಕರಾವಳಿ – ಸಮುದ್ರದಂಡೆ

  • ಕರಿ – ಆನೆ 

  • ಕರಿಮುಗಿಲು-ಕಪ್ಪಾದ ಮೋಡ

  • ಕರುಳಬಳ್ಳಿ – ಸಂಬಂಧವನ್ನು ಕುರಿತು ಹೇಳುವಾಗ ಬಳಸುವ ಪದ

  • ಕಲಕು – ಕದಡು

  • ಕಲರವ – ಮಧುರವಾದ ಧ್ವನಿ , ಮೋಹಕ ಧ್ವನಿ

  • ಕಲಿ – ವೀರ

  • ಕಲುಷಿತ  –  ಮಲಿನ   

  • ಕವಿದಿರುವ – ಆವರಿಸಿರುವ, ಮರೆಮಾಡಿರುವ.

  • ಕಷ್ಟಕೋಟಲೆ – ಕಷ್ಟಗಳ ಸರಮಾಲೆ.

  • ಕಷಾಯ – ಔಷಧಿ, ಗಿಡಮೂಲಿಕೆಗಲಿಂದ ತೆಗೆದ ರಸ.

  • ಕಹಳೆ – ಉದ್ದವಾಗಿ ಬಾಗಿರುವ ತುತ್ತೂರಿ

  • ಕಳ್ಳುಬಳ್ಳಿ-ರಕ್ತಸಂಬಂಧಿಕರು

  • ಕಳಕಳಿಸು – ಮನೋಹರ ಪ್ರಕಾಶಿಸು

  • ಕಳೇಬರ – ಮೃತ ದೇಹ/ಶರೀರ

  • ಕಾಡು – ಅರಣ್ಯ, ಅಡವಿ.

  • ಕಾಣೆಯಾಗು – ಇಲ್ಲದಂತಾಗು, ಕಾಣದೆ ಇರುವುದು,

  • ಕಾಪು   –  ರಕ್ಷಣೆ

  • ಕಾಯ್ದೆ  –  ಕಾನೂನು

  • ಕಾರ್ಯಕ್ಷೇತ್ರ : ಕಾರ್ಯರಂಗ, ಕೆಲಸ ನಿರ್ವಹಿಸುವ ವಲಯದ ವ್ಯಾಪ್ತಿ.

  • ಕಾಲಕೂಡಿಬರು : ಸಮಯ, ಸಂದರ್ಭ ಒದಗಿ ಬರುವುದು.

  • ಕಾವಡಿ – ಅಡ್ಡೆ ಹೆಗಲಮೇಲೆ ಹೊತ್ತು ತರುವ ಬಿದಿರಿನ ದಬ್ಬೆ.

  • ಕಾವಲಿರಿಸು – ರಕ್ಷಿಸು

  • ಕಾಳಗ – ಯುದ್ಧ

  • ಕಾಳಜಿ –  ಜಾಗರೂಕತೆ ಆಸಕ್ತಿ ತುಡಿತ.

  • ಕಿಂಕರ – ಸೇವಕ 

  • ಕಿಂಕರ್ತವ್ಯಮೂಢ-ದಿಕ್ಕುತೋಚದ ಸ್ಥಿತಿ;

  • ಕಿಂಕರ-ಸೇವಕ

  • ಕಿಚ್ಚು-ಬೆಂಕಿ

  • ಕಿಡು   –  ನಾಶವಾಗು

  • ಕಿಮ್ಮತ್ತು-ಬೆಲೆ, ಗೌರವ  

  • ಕಿರೀಟ – ಮುಕುಟ

  • ಕುಂಡ-ಬೆಂಕಿಯ ಕುಣಿ,

  • ಕುಚೋದ್ಯ – ಕಿಡಿಗೇಡಿತನ; ಅಪಹಾಸ್ಯ.

  • ಕುಟಿಲ – ಮೋಸ, ವಂಚನೆ

  • ಕುಟೀರ – ಗುಡಿಸಲು

  • ಕುಟುಂಬ – ಮನೆತನ, ಒಕ್ಕಲು

  • ಕುಡಿ-ವಂಶ, ಚಿಗುರು

  • ಕುಣಿಕೋಲು – ಕುಣಿಸುವವನು ಹಿಡಿದುಕೊಳ್ಳುವ ಕೋಲು.

  • ಕುತೂಹಲ – ತವಕ, ತಿಳಿದುಕೊಳ್ಳುವ ಆಸಕ್ತಿ.

  • ಕುನ್ನಿ – ನಾಯಿಮರಿ

  • ಕುಪಿತ – ಸಿಟ್ಟಿನಿಂದ ಕೂಡಿದ

  • ಕುಬ್ಜ – ಕುಳ್ಳ; ಸಣ್ಣವ.   

  • ಕುಲ-ಗುಂಪು, ಜಾತಿ

  • ಕುಲಪತಿ : ವಿಶ್ವವಿದ್ಯಾಲಯದ ಮುಖ್ಯಸ್ಥ.

  • ಕುಶಲತೆ-ನೈಪುಣ್ಯ

  • ಕುಸುಲ – ಸೂಕ್ಷ್ಮ ಕೆತ್ತನೆ ಚಿತ್ತಾರ.

  • ಕೂಡ್ರಿಸಿ – ಕುಳ್ಳಿರಿಸಿ

  • ಕೂಡಲ ಕೋಣೆ – ಪಡಸಾಲೆ ಮೊಗಸಾಲೆ.

  • ಕೂಪಮಂಡೂಕ – ಬಾವಿಯೊಳಗಿನ ಕಪ್ಪೆ. 

  • ಕೂಲಂಕಷ – ಸಮಗ್ರವಾದ

  • ಕೃತಕತೆ-ಅಸಹಜತೆ

  • ಕೃತಘ್ನ – ಉಪಕಾರ ಸ್ಮರಣೆ ಇಲ್ಲದಿರುವವನು.

  • ಕೃತಜ್ಞತೆ – ಉಪಕಾರ ಸ್ಮರಣೆ

  • ಕೃತಾರ್ಥ-ಧನ್ಯತೆಯ ಭಾವ

  • ಕೃತಿ – ಕೆಲಸ

  • ಕೃಪೆ – ದಯೆ, ಕರುಣೆ.

  • ಕೆಂಡ – ಉರಿಯುತ್ತಿರುವ ಇದ್ದಿಲು

  • ಕೆಂಬಣ್ಣ – ಕೆಂಪು ಬಣ್ಣ, ರಕ್ತವರ್ಣ.

  • ಕೆಚ್ಚು – ಧೈರ್ಯ, ಸಾಹಸ;  

  • ಕೆಚ್ಚೆದೆ – ಧೈರ್ಯಶಾಲಿ; ಸಾಹಸಿ., ಗಟ್ಟಿಯಾದಎದೆ

  • ಕೆಣಕಿ-ಸಿಟ್ಟಿಗೇಳುವಂತೆ ಮಾಡು

  • ಕೆದರಿದ-ಹರಡಿದ

  • ಕೆನೆಮೊಸರು – ಕೆನೆ ಸಹಿತವಾದ ಮೊಸರು.

  • ಕೇಂದ್ರೀಕರಿಸು-ಒಂದೇ ಸ್ಥಳದಲ್ಲಿ ನಿಲ್ಲಿಸು;

  • ಕೈಗೆಟಕುವ – ಕೊಳ್ಳಲು ಸಾಧ್ಯವಾಗುವ, ಸುಲಭವಾಗಿ ದೊರೆಯುವುದು

  • ಕೈಗೆಟುಕದ – ಕೈಗೆ ಸಿಗದ

  • ಕೈಯಾಸೆ-ಲಂಚ, ಆಮಿ

  • ಕೊಂಕು – ಡೊಂಕು

  • ಕೊಂಚ  –  ಅಲ್ಪಸ್ವಲ್ಪ 

  • ಕೊಂಡಾಡು – ಹೊಗಳು

  • ಕೊನರು ಚಿಗುರು

  • ಕೊರಗು – ನೋವು

  • ಕೊರಡಾಗು-ಮರಗಟ್ಟು

  • ಕೊಳ್ಳ – ತಗ್ಗು; ಗುಣಿ.   

  • ಕೊಳಕು – ಮಲಿನ, ಗಲೀಜು.

  • ಕೊಳೆ – ಹೊಲಸು ಕಸ.

  • ಕೋಡಿ – ಕೆರೆತುಂಬಿ ಹರಿಯುವುದು.

  • ಕೋರ್ಟ್ – ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ, ನ್ಯಾಯಾಲಯ.

  • ಕೋರು – ವಿನಂತಿಸು

  • ಖಂಡಿತ-ನಿಶ್ಚಿತ, ನಿಜವಾಗಿ

  • ಖ್ಯಾತಿವೆತ್ತ-ಪ್ರಸಿದ್ಧಿ ಹೊಂದಿದ

  • ಖಗ ಹಕ್ಕಿ

  • ಖಜಾಂಚಿ-ಹಣಕಾಸಿನ ಮೇಲ್ವಿಚಾರಕ

  • ಖಜಾನೆ – ಹಣಸಂಗ್ರಹಿಸುವ ಪೆಟ್ಟಿಗೆ ತಿಜೋರಿ

  • ಖತಿ – ಕೋಪ, ದುಃಖ, ಅಳಲು

  • ಖಳ – ದುಷ್ಟ

  • ಖಾರ – ತೀಕ್ಷ್ಣ, ಕಟು

  • ಖಿನ್ನ-ಬಳಲಿದ

  • ಗಂಜಲ – ಗೋಮೂತ್ರ

  • ಗಂಡಾಂತರ – ವಿಪತ್ತು,  ತೊಂದರೆ.

  • ಗ್ರಹಿಸು – ಅರ್ಥಮಾಡಿಕೊ, ತಿಳಿದುಕೊ.

  • ಗ್ರಾಮದ ಓಣಿ – ಹಳ್ಳಿಯ ಬೀದಿ.

  • ಗಜ – ಆನೆ

  • ಗಜಗಮನ – ನಿಧಾನವಾದ ನಡೆ

  • ಗಡಣ – ಸಮೂಹ

  • ಗಡಸು – ಒರಟು , ಬಿರುಸು

  • ಗಣಿಸದೆ – ಲೆಕ್ಕಿಸದೆ

  • ಗತ್ತು – ಅಹಂಕಾರ;

  • ಗದ್ಗದ ಕಂಠ-ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ.

  • ಗದ್ಗದಿತ – ದುಃಖಭರಿತ ನಡುಕದ ಧ್ವನಿ 

  • ಗದ್ದುಗೆ-ಪೀಠ

  • ಗಮನಿಸು – ಲಕ್ಷಿಸು

  • ಗರ್ವ – ಸೊಕ್ಕು, ಅಹಂಕಾರ

  • ಗರಿಮೆ – ಹಿರಿಮೆ

  • ಗರಿಯರು – ಹಿರಿಮೆಯುಳ್ಳವರು

  • ಗಳಿಕೆ – ಸಂಪಾದನೆ ಆದಾಯ.

  • ಗಳಿಸು – ಸಂಪಾದಿಸು, ಪಡೆ.

  • ಗಾಡಿ – ಚಕ್ಕಡಿ, ಬಂಡಿ.

  • ಗಾದೆ-ಹಿರಿಯರ ಅನುಭವದ ಮಾತು,

  • ಗಾಬರಿ – ಹೆದರಿಕೆ ಭಯ.

  • ಗಿರಕಿ – ತಿರುಗು

  • ಗುಂಗು – ತಲ್ಲೀನತೆ ಮುಳುಗುವಿಕೆ.

  • ಗುಂಡು-ಬಂದೂಕಿನ ಗೋಲಿ

  • ಗುಟುಕು – ಒಂದು ಸಲ ನುಂಗುವಷ್ಟು.

  • ಗುಡಿ – ಪವಿತ್ರ ಸ್ಥಳ ದೇವಾಲಯ.

  • ಗುಣಾಢ್ಯರು-ಗುಣವಂತ

  • ಗುಳ್ಳೆ – ಬೊಬ್ಬೆ, ಬೊಕ್ಕೆ.

  • ಗೂಢಾರ್ಥ – ಒಳ ಅರ್ಥ ರಹಸ್ಯವಾದುದು.

  • ಗೈಮೆ – ದುಡಿಮೆ

  • ಗೊಡ್ಡು ಬೆದರಿಕೆ – ವ್ಯರ್ಥಗದರಿಕೆ 

  • ಗೊಡ್ಡು-ನಿಷ್ಫಲ, ಫಲ ನೀಡದ, ನಿಷ್ಫಲತೆ 

  • ಗೊಣಗು – ಆಕ್ಷೇಪ; ವಟಗುಡು; ಅಸ್ಪಷ್ಟವಾಗಿ ಮಾತನಾಡು.

  • ಗೊತ್ತಿಗೆ ಹಚ್ಚು-ಪರೀಕ್ಷಿಸಿ ತಿಳಿ

  • ಗೊತ್ತು – ಪರಿಚಯ, ತಿಳಿದಿರುವುದು.

  • ಗೊಮ್ಮಟ ವ್ಯಕ್ತಿತ್ವ  –  ಉನ್ನತ ವ್ಯಕ್ತಿತ್ವ

  • ಗೋಗರೆ – ದೈನ್ಯದಿಂದ ಬೇಡಿಕೊಳ್ಳು.

  • ಗೋಸುಂಬೆ-ದೇಹದ ಬಣ್ಣವನ್ನು ಬದಲಿಸಬಲ್ಲ ಪ್ರಾಣಿ

  • ಗೋಳು-ಕಷ್ಟ, ಸಂಕಟ   

  • ಗೌಪ್ಯ – ಗುಟ್ಟು, ರಹಸ

  • ಘ್ರಾಣೇಂದ್ರಿಯ –  ಮೂಗು

  • ಘಟ್ಟ – ಬೆಟ್ಟಗಳ ಸಾಲು

  • ಘನ – ಶ್ರೇಷ್ಠ; ಮಹತ್ವದ್ದು. 

  • ಘನತೆ – ಹಿರಿಮೆ

  • ಘಮಲು-ಕಂಪಾದ

  • ಘಾಟು – ಕಟುವಾಸನೆ

  • ಘೀಳಿಡು – ಆನೆಯ ಕೂಗು

  • ಘೋರ  –  ಆಪತ್ತು

  • ಘೋಷಣೆ – ಗಟ್ಟಿಯಾದ ಕೂಗು, ಆಜ್ಞೆ ಮಾಡುವ ಅಧಿಕಾರ