ಚ – ಞ

  • ಚ್ಯುತಿ-ಹಾನಿ

  • ಚಕ್ಕಡಿ – ಎತ್ತಿನಗಾಡಿ

  • ಚಪ್ಪಡಿಕಲ್ಲು – ಚಪ್ಪಡಿ, ಹಾಸುಗಲ್ಲು.

  • ಚಮಕಿಸು – ಹೊಳಪು

  • ಚರ್ಚೆ – ವಾಗ್ವಾದ, ತರ್ಕ.

  • ಚರಿಗೆ – ಭಿಕ್ಷಾಟನೆ

  • ಚರಿತೆ – ಇತಿಹಾಸ

  • ಚಹರೆ-ಲಕ್ಷಣ

  • ಚಳ್ಳೇಹಣ್ಣು ತಿನ್ನಿಸು – ಮೋಸಗೊಳಿಸು

  • ಚಳುವಳಿ – ಹೋರಾಟ, ಆಂದೋಲನ;

  • ಚಾಚಿ – ನೀಡಿ, ಮುಂದೆ ಒಡ್ಡಿ

  • ಚಾಡಿ -ಇಲ್ಲದ್ದನ್ನು ಹೇಳು

  • ಚಾತುರ್ಮಾಸ – ನಾಲ್ಕು ತಿಂಗಳು, ನಾಲ್ಕು ತಿಂಗಳು ನಡೆಸುವ ವ್ರತ.

  • ಚಾವಡಿ-ಹಳ್ಳಿಯಲ್ಲಿ ಪಂಚಾಯಿತಿ ಸಭೆ ಸೇರುವ

  • ಚಾಳೀಸು – ಕನ್ನಡಕ

  • ಚಿಂತನೆ – ಯೋಚನೆ, ಧ್ಯಾನ.

  • ಚಿಂತೆ – ಯೋಚನೆ, ದುಃಖ.

  • ಚಿಕಿತ್ಸೆ – ಆರೈಕೆ, ಶುಶ್ರೂಷೆ.

  • ಚಿಗಿಯಲಿ – ಚಿಗುರಲಿ.

  • ಚಿಗುರು- ಕುಡಿ 

  • ಚಿತ್ತ – ಮನಸ್ಸು

  • ಚಿನ್ನದ – ಬಂಗಾರದ

  • ಚಿನ್ನಾಟ – ವಿನೋದದ ಆಟ 

  • ಚಿಮ್ಮು – ತಳಿ, ನೆಗೆ, ಬೀಸು

  • ಚಿರಪರಿಚಿತಳು – ದೀರ್ಘಕಾಲದ ಪರಿಚಯವುಳ್ಳವಳು, ಎಲ್ಲರಿಗೂ ಗೊತ್ತಿರುವಾಕೆ.

  • ಚೆಕ್ಕು – ಬ್ಯಾಂಕ್ ಹುಂಡಿ ಚೀಟಿ.

  • ಚೈತ್ರಯಾತ್ರೆ – ವಿಜಯಯಾತ್ರೆ 

  • ಚೈತನ್ಯ ಚಟುವಟಿಕೆ

  • ಛತ್ರ-ಉಚಿತವಾಗಿ ಊಟ, ವಸತಿಗಳನ್ನು ನೀಡುವ ಸ್ಥಳ

  • ಛಲ – ಹಟ

  • ಛವಿ – ಹೊಳಪು ಕಾಂತಿ ಬಣ್ಣ.

  • ಛಾಯೆ – ನೆರಳು

  • ಛೀಮಾರಿ ಹಾಕು – ತಿರಸ್ಕಾರ ಧಿಕ್ಕರಿಸು ಅಪಮಾನಿಸು.

  • ಜಂಬ – ಗರ್ವ, ಒಣ ಆಡಂಬರ

  • ಜ್ಯೋತಿ – ಬೆಳಕು ದೀಪ.

  • ಜಗ – ಜಗತ್ತು ಪ್ರಪಂಚ.

  • ಜಗ್ಗಿಸಿ – ಜಾಸ್ತಿ, ಹೆಚ್ಚು

  • ಜಗದಲೀಲೆ – ಪ್ರಕೃತಿಯ ಆಟ

  • ಜಗದೊಡೆಯ – ಪರಮಾತ್ಮ

  • ಜಗಳ – ಕಲಹ

  • ಜಡ  –  ಮಂದ, ಚಟುವಟಿಕೆಯಿಲ್ಲದ

  • ಜಡಿ-ಸುರಿ

  • ಜನ್ಮತಾಳು – ಹುಟ್ಟು, ಜನಿಸು.

  • ಜನಪ್ರಿಯ – ಜನರ ಮೆಚ್ಚುಗೆಗೆ ಪಾತ್ರವಾದ.

  • ಜಬರಿಸು – ಹೆದರಿಸು, ಗದರಿಸು.

  • ಜಮ್ಮದು – ಅರಸನು ಇನಾಮಾಗಿ ಕೊಟ್ಟ ಭೂಮಿ

  • ಜಯ – ಗೆಲುವು

  • ಜಲಚರ – ನೀರಿನಲ್ಲಿ ವಾಸಿಸುವ ಜೀವಿಗಳು.

  • ಜಾಂಬವಂತ – ಕರಡಿ

  • ಜಾಂಬಳಿ – ನೇರಳೆಬಣ್ಣ

  • ಜಾಗರೂಕತೆ-ಎಚ್ಚರದಿಂದಿರುವ;

  • ಜಾತಕ ಸಮೇತ – ಸವಿವರವಾದ ಮಾಹಿತಿಯಿಂದ ಕೂಡಿದ, ಜನ್ಮಕುಂಡಲಿ

  • ಜಾದೂ ಲೋಕ – ಇಂದ್ರಜಾಲ ನಡೆಯುವ ಸ್ಥಳ, ಮಾಯಾವಿದ್ಯೆಯ ಪ್ರಪಂಚ.

  • ಜಾನ-ಜ್ಞಾನ

  • ಜಾನುವಾರು – ಪ್ರಾಣಿಗಳು

  • ಜಾವ-ಸಮಯ, ಹೊತ್ತು;

  • ಜಿಗಿ-ಹಾರು, ನೆಗೆ

  • ಜಿನುಗು – ತೊಟ್ಟಿಕ್ಕು

  • ಜಿಹ್ವೆ-ನಾಲಗೆ

  • ಜೋತಾಡು – ನೇತಾಡುವುದು

  • ಜೋರುಮಾಡು  –  ದಬಾಯಿಸು

  • ಝಂಕಿಸು- ಗದರಿಸು, ಬೆದರಿಸು

  • ಝಾಡಿಸು-ಕೊಡವು