ಕನ್ನಡ (ಭಾಷೆ-ವ್ಯಾಕರಣ)
ವ್ಯಾಕರಣ (Grammar)
ವಿರುದ್ಧಾರ್ಥಕ ಪದಗಳು
2 Topics
ವಿರುದ್ಧಾರ್ಥಕ ಪದಗಳು-1
ವಿರುದ್ಧಾರ್ಥಕ ಪದಗಳು-2
ತತ್ಸಮ : ತದ್ಭವ
2 Topics
ತತ್ಸಮ : ತದ್ಭವ – 1
ತತ್ಸಮ : ತದ್ಭವ – 2
ದೇಶೀಯ, ಅನ್ಯದೇಶೀಯ ಪದಗಳು
4 Topics
ಸಂಸ್ಕೃತ ಭಾಷೆಯಿಂದ ಬಂದ ಪದಗಳು
ಇಂಗ್ಲಿಷ್ ಭಾಷೆಯಿಂದ ಬಂದ ಪದಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಪದಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಪದಗಳು
ಪದಗಳ ಅರ್ಥ
7 Topics
ಅ – ಅಃ
ಕ – ಙ
ಚ – ಞ
ಟ -ಣ
ತ -ನ
ಪ -ಮ
ಯ -ಳ
ಲೇಖನ ಚಿಹ್ನೆಗಳು
ವಿಭಕ್ತಿ ಪ್ರತ್ಯಯಗಳು
ಪತ್ರ ಲೇಖನ (Letter Writing)
ಕನ್ನಡದ ಕವಿಗಳು
ಕನ್ನಡ ಕವಿಗಳ ಪರಿಚಯ
ನಿಜನಾಮ-ಕಾವ್ಯ ನಾಮ
ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು
ಕೀರ್ತನಕಾರರು ಮತ್ತು ವಚನಕಾರರ ಅಂಕಿತಗಳು
ಕನ್ನಡದ ಕವಿಗಳು ಮತ್ತು ಬಿರುದುಗಳು
ಕನ್ನಡ ಸಾಹಿತ್ಯ ಸಮ್ಮೇಳನ (ಸ್ಥಳ-ಅಧ್ಯಕ್ಷರು)
Previous Topic
Next Topic
ತ -ನ
ಕನ್ನಡ (ಭಾಷೆ-ವ್ಯಾಕರಣ)
ಪದಗಳ ಅರ್ಥ
ತ -ನ
ತಂಗುದಾಣ – ತಾತ್ಕಾಲಿಕವಾಗಿ ಉಳಿದುಕೊಳ್ಳುವ ಜಾಗ.
ತಂಟೆ – ಗೋಜು, ಉಪದ್ರವ.
ತಂತ್ರ – ಉಪಾಯ
ತ್ರಿಪದಿ-ಮೂರು ಸಾಲಿನ ಪದ್ಯ
ತ್ರಿಶಂಕು – ಇಕ್ಕಟ್ಟಿನಲ್ಲಿ ಸಿಲುಕಿದವ
ತಕರಾರು – ಅಡ್ಡಿ, ಆಕ್ಷೇಪಣೆ
ತತ್ತ್ವ – ಸಿದ್ಧಾಂತ, ಸಾರಸತ್ವ
ತತ್ತರಿಸು – ನಡುಗು ಕಂಪಿಸು.
ತತ್ರಾಣಿ – ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ.
ತದ್ರೂಪ – ಅದೇ ತರಹದ
ತನ್ಮಯತೆ-ಸಂಪೂರ್ಣವಾಗಿ ಮಗ್ನವಾಗುವುದು
ತಪ – ತಪಸ್ಸು, ಧ್ಯಾನ.
ತಪ್ಪುನೆಪ್ಪು – ತಪ್ಪು ಒಪ್ಪುಗಳು
ತಬ್ಬಿಬ್ಬಾಗು-ಕಕ್ಕಾಬಿಕ್ಕಿಯಾಗು, ದಿಗ್ಭ್ರಮೆಯಾಗು
ತರ್ಕ – ಆರು ದರ್ಶನಗಳಲ್ಲಿ ಒಂದು, ವಾದ
ತರಾತುರಿ – ಅವಸರ
ತಲ್ಲಣ – ತಳಮಳ
ತಲುಪು – ಮುಟ್ಟು, ಸೇರು.
ತಲೆತಲಾಂತರ-ಬಹಳ ವರ್ಷಗಳಿಂದ
ತವಕ – ಆತುರ, ತರಾತುರಿ,ಕಾತರ
ತಸ್ಕರ – ಕಳ್ಳ
ತಹಬಂದಿ-ಹತೋಟಿ
ತಳ – ಕೆಳಭಾಗ, ಸಮತಟ್ಟಾದ ಪ್ರದೇಶ
ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ.
ತಾಣ – ಜಾಗ ಸ್ಥಾನ, ಸ್ಥಳ.
ತಾರಕ – ಎತ್ತರದ ಸ್ವರ
ತಾರೆ – ನಕ್ಷತ್ರ
ತಾಳ್ಮೆಗೆಡು : ಸಹನೆ ಕಳೆದುಕೊಳ್ಳು, ಕೋಪಕ್ಕೆ ಒಳಗಾಗು.
ತಿಮಿರ – ಕತ್ತಲೆ, ಅಜ್ಞಾನ.
ತಿರುಕ – ಭಿಕ್ಷುಕ
ತಿರುಳು – ಸತ್ವ, ಸಾರ.
ತಿರೋಹಿತ-ಮರೆಯಾಗು
ತೀರ್ಪು – ನಿರ್ಣಯ, ತೀರ್ಮಾನ.
ತೀವ್ರ – ಹರಿತ, ರಭಸ
ತುಚ್ಛ – ಕೀಳು, ನೀಚ, ನಿಂದನೀಯ.
ತುರಂಗ-ಕುದುರೆ
ತುರ್ತು – ಜರೂರು, ಕೂಡಲೆ.
ತುರಾಯಿ – ಹಕ್ಕಿಗಳ ಜುಟ್ಟು
ತುರಿಕೆ – ನವೆ, ಕೆರೆತ.
ತೃಣ – ಹುಲ್ಲು; ಗರಿಕೆ.
ತೆಂಕಣ-ದಕ್ಷಿಣ
ತೆರ – ರೀತಿ
ತೇಜೋವಧೆ-ಅವಮಾನ
ತೊಯ್ದು – ನೀರಿನಿಂದ ನೆನೆದು
ತೊರೆ – ಚಿಕ್ಕಹೊಳೆ, ಬಿಡು
ತೊಳಗು – ಪ್ರಕಾಶಿಸು
ತೋಪು – ಮರಗಳ ಸಮೂಹ, ಮರಗಳ ಗುಂಪು
ದಂಗಾಗು – ಆಶ್ಚರ್ಯಪಡು
ದ್ಯೋತಕ-ಗುರುತು ,ಸಂಕೇತ
ದ್ರವ್ಯ – ಐಶ್ವರ್ಯ, ಸಂಪತ್ತು
ದ್ರೋಹ – ಕೇಡನ್ನೆಣಿಸು, ವಿಶ್ವಾಸಘಾತ
ದ್ವಾರ – ಬಾಗಿಲು
ದ್ವಿಜ-ಬ್ರಾಹ್ಮಣ
ದಟ್ಟ – ಸಾಂದ್ರವಾದ, ಮಂದವಾದ.
ದಟ್ಟಿಕುಪ್ಪಸ – ಸೊಂಟಕ್ಕೆ ಕಟ್ಟುವ ವಸ್ತ್ರ
ದಣಿವು – ಆಯಾಸ
ದನಗಾಹಿ-ದನಗಳನ್ನು ಕಾಯುವವನು
ದನುಜ-ರಾಕ್ಷಸ
ದರ್ಪ – ಅಹಂಕಾರ
ದರ್ಬಾರು – ಅಧಿಕಾರ ನಡೆಸುವಿಕೆ
ದರ್ಶನ – ಭೇಟಿ, ಕಾಣುವಿಕೆ.
ದಾಪುಗಾಲು – ದೊಡ್ಡ ಹೆಜ್ಜೆ.
ದಾಯಾದಿ : ಅಣ್ಣತಮ್ಮಂದಿರ ಮಕ್ಕಳು.
ದಾರುಣ – ಭಯಂಕರ
ದಾಸ್ಯ – ಊಳಿಗ, ಅಧೀನತೆ
ದಿಕ್ಕಿಲ್ಲ-ಗತಿ ಇಲ್ಲದ, ಅನಾಥವಾದ;
ದಿಕ್ಸೂಚಿ – ದಿಕ್ಕನ್ನು ತಿಳಿಸುವ ಯಂತ್ರ.
ದಿಗ್ಗಜ – ಪ್ರಸಿದ್ಧ, ಹೆಸರಾಂತ;
ದಿಗ್ದರ್ಶಕ-ನಿರ್ದೇಶಕ, ಮಾರ್ಗದರ್ಶಕ
ದಿಗ್ಭ್ರಮೆ – ಆಶ್ಚರ್ಯ
ದಿಗಿಲು-ಭಯ
ದಿಟ್ಟಹೆಜ್ಜೆ-ಧೈರ್ಯದ ಹೆಜ್ಜೆ
ದಿಟ್ಟಿ-ದೃಷ್ಟಿ, ನೋಟ
ದಿಟ್ಟಿಸು – ನೋಡು
ದಿನ್ನೆ – ದಿಬ್ಬ, ಬೋರೆ, ತೆವರು.
ದಿನಪ – ಸೂರ್ಯ; ರವಿ; ಆದಿತ್ಯ.
ದಿವಿನಾಗು – ಮೈತುಂಬಿಕೊಳ್ಳು
ದೀಕ್ಷೆ-ಶಪಥ
ದೀನತೆ – ಬಡತನ
ದುಂಬಾಲು – ಬೆನ್ನುಹತ್ತು ಹಿಂದೆ ಬೀಳು
ದುಗ್ಧಹಾಸ – ಹಾಲುನಗೆ; ಮುಗುಳ್ನಗೆ.
ದುಗುಡ – ವ್ಯಸನ ಚಿಂತೆ ಆತಂಕ.
ದುರ್ಗಮ – ಹೋಗಲು ಅಸಾಧ್ಯವಾದ.
ದುರ್ದೈವ – ಕೆಟ್ಟ ಅದೃಷ್ಟ ದೌರ್ಭಾಗ್ಯ.
ದುರ್ಭರ – ತಾಳಲಾಗದ
ದುರದೃಷ್ಟ – ಕೆಟ್ಟ ಅದೃಷ್ಟ.
ದುರಾಕ್ರಮಣ – ಮೋಸದ ಧಾಳಿ
ದುರುಗುಟ್ಟು – ನೆಟ್ಟಕಣ್ಣಿನಿಂದ ನೋಡು, ದಿಟ್ಟಿಸಿ ನೋಡು.
ದುಸ್ತರ- ಕಠಿಣ
ದೂರು – ನಿಂದಿಸು, ಆಪಾದನೆ.
ದೂಷಣೆ – ನಿಂದನೆ
ದೃಗುಜಲ-ಕಣ್ಣನೀರು
ದೃಷ್ಟಿಕೋನ – ನೋಡುವ ರೀತಿ
ದೇಣಿಗೆ – ಚಂದಾ; ವಂತಿಕೆ; ದಾನ.
ದೇದೀಪ್ಯ – ಪ್ರಕಾಶ
ದೌರ್ಜನ್ಯ – ದಬ್ಬಾಳಿಕೆ, ಹಿಂಸೆ.
ದೌರ್ಬಲ್ಯ – ಬಲಹೀನವಾದ.
ದೌಲತ್ತು – ಅಹಂಕಾರ ಅಧಿಕಾರದ ದರ್ಪ.
ಧ್ಯಾಸ – ನೆನಪು ಜ್ಞಾಪನ
ಧರೆ – ಭೂಮಿ
ಧಾವಿಸು – ಓಡಿ ಬರುವುದು; ಅವಸರದಿಂದ ಬರುವುದು
ಧಿಕ್ಕರಿಸು-ತಿರಸ್ಕರಿಸು
ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ.
ಧುಮುಕು-ಸೇರು, ಭಾಗವಾಗು
ಧೂರ್ತ-ಮೋಸಗಾರ
ಧೃತಿ – ಧೈರ್ಯ
ಧೋತ್ರ-ಪಂಚೆ
ನಂಜು – ವಿಷ
ನಕ್ಷತ್ರ ಜಾರಿ – ರಾತ್ರಿ ಕಳೆದು
ನಚ್ಚು – ನಂಬು
ನತ್ತು – ಮೂಗುತಿ
ನಭ – ಆಕಾಶ, ಆಗಸ.
ನಮ್ರತೆ – ವಿನಯ ,ವಿಧೇಯ, ಬಾಗಿದ.
ನಯನ – ಕಣ್ಣು ಅಕ್ಷಿ ನೇತ್ರ.
ನರ್ತನ – ಕುಣಿತ
ನಸುಕು – ಬೆಳಗಿನ ಜಾವ.
ನಾಗಾಲೋಟ – ಅತಿವೇಗದ ಓಟ.
ನಾಡು – ದೇಶ
ನಾವೆ – ದೋಣಿ
ನಿಗೂಢ – ರಹಸ್ಯ
ನಿಟ್ಟುಸಿರು-ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ.
ನಿತ್ಯ – ಪ್ರತಿ ದಿನ
ನಿಪುಣ – ಪರಿಣತಿ
ನಿಯತಿ – ವಿಧಿ ನಿಯಮ
ನಿರಂತರ – ಸದಾ; ಯಾವಾಗಲೂ,ಎಡೆಬಿಡದ, ಸತತವಾದ
ನಿರ್ದಿಷ್ಟ-ಗೊತ್ತುಪಡಿಸಿದ, ನಿಖರ
ನಿರ್ಭೀತ-ಭಯವಿಲ್ಲದ
ನಿರ್ಮತ್ಸರ – ದ್ವೇಷ ಇಲ್ಲದಿರುವುದು
ನಿರಾಶೆ-ಆಶಾಭಂಗ
ನಿಲುವು – ಅಭಿಪ್ರಾಯ
ನಿವಾರಣೆ – ದೂರಮಾಡು, ಹೋಗಲಾಡಿಸು;
ನಿಷ್ಕಾಮಸೇವೆ-ಯಾವ ಬಯಕೆಯೂ ಇಲ್ಲದೆ ಮಾಡುವ ಉಪಕಾರ
ನಿಷ್ಣಾತ – ಪಾರಂಗತ
ನಿಷೇಧ – ನಿರಾಕರಣೆ
ನೀಗು-ಹೋಗಲಾಡಿಸು
ನೀಚ – ಕೆಟ್ಟ ಕೀಳಾದ.
ನೀರೂರು – ಆಸೆ ಉಂಟಾಗು.
ನುಡಿ – ಭಾಷೆ, ಮಾತು
ನುಡಿಯ ಹೊಳೆ – ನಿರಂತರವಾಗಿ ಕೇಳಿ ಬರುವ ಮಾತು.
ನುಣುಚಿಕೋ – ತಪ್ಪಿಸಿಕೋ
ನೂತ್ನ – ನೂತನ; ಹೊಸ.
ನೆಗೆ – ಹಾರು ಜಿಗಿ.
ನೆಚ್ಚು – ನಂಬು
ನೆತ್ತರು – ರಕ್ತ
ನೆತ್ತಿ – ತಲೆಯ ಮಧ್ಯಭಾಗ, ಹಣೆ
ನೆತ್ತಿಗೇರು – ಹೆಚ್ಚಾಗು
ನೆರೆ-ಸೇರು, ಜೊತೆಗೂಡು, ಒಟ್ಟುಗೂಡು,
ನೆರೆಹಿ-ಜೋಡಿಸಿ
ನೆವ – ಕಾರಣ, ನೆಪ.
ನೇಗಿಲು – ಭೂಮಿಯನ್ನು ಉಳುವ ಸಾಧನ
ನೇತೃತ್ವ – ಮುಂದಾಳತ್ವ, ಹಿರಿತನ.
ನೇಸರ – ಸೂರ್ಯ
Previous Topic
Back to Lesson
Next Topic
Login
Accessing this course requires a login. Please enter your credentials below!
Username or Email Address
Password
Remember Me
Lost Your Password?
Register
Don't have an account? Register one!
Register an Account