ಅ – ಅಃ

  • ಅಂಕಿತ – ಗುರುತು   

  • ಅಂಕೆ-ಕಡಿವಾಣ

  • ಅಂಗಲಾಚು – ಬೇಡು 

  • ಅಂಚು – ತುದಿ; ಕೊನೆ , ದಡ, ತೀರ; ಪಕ್ಕ, ಮೇಲೆ

  • ಅಂಜಿ-ಹೆದರಿ 

  • ಅಂಜು  –  ಹೆದರು

  • ಅಂತಃಕಲಹ – ಒಳಜಗಳ

  • ಅಂತಂತ್ರಿಸಿ  –  ನೀಳವಾಗಿ  ನೋಡುವುದು.

  • ಅಂತಃಪುರ-ರಾಣಿವಾಸ.

  • ಅಂತರಂಗ – ಒಳಗಿನ  ಮನಸ್ಸಿನ ಒಳಗೆ

  • ಅಂತರ್ಧಾನ – ಕಣ್ಮರೆಯಾಗು, ಮಾಯವಾಗು

  • ಅಂಬುಜ – ತಾವರೆ

  • ಅಕ್ಷರಶಃ – ಪ್ರತಿಯೊಂದು ವಿವರದಲ್ಲೂ

  • ಅಗ್ಗ-ಕಡಿಮೆ ಬೆಲೆ

  • ಅಗ್ಗಳ- ಶ್ರೇಷ್ಠ 

  • ಅಗ್ರಹಾರ -ಬ್ರಾಹ್ಮಣರು ವಾಸಿಸುವ ಕೇರಿ.

  • ಅಗಡು-ಶೌರ್ಯ

  • ಅಗಲು-ಬಿಟ್ಟುಹೋಗು

  • ಅಗಸಿ – ಹೆಬ್ಬಾಗಿಲು , ಊರಿನ ಪ್ರವೇಶದ್ವಾರ, ಊರ ಹೆಬ್ಬಾಗಿಲು

  • ಅಘ್ರ್ಯ – ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರು

  • ಅಚಲವಾದ – ಸ್ಥಿರವಾದ, ಬದಲಾಗದ

  • ಅಜಗಜಾಂತರ-ಆಡಿಗೂ ಆನೆಗೂ ಇರುವ ವ್ಯತ್ಯಾಸ

  • ಅಜೇಯ-ಗೆಲ್ಲಲಾಗದ

  • ಅಡವಿ – ಕಾಡು, ಅರಣ್ಯ , ಕಾನನ.

  • ಅಣಿ – ಸಿದ್ಧತೆ : ಅಣಿಯಾಗು-ಸಿದ್ಧವಾಗು

  • ಅತಿಕುಟಿಲಮನ – ಅತಿಯಾದ ಮೋಸದ ಮನಸ್ಸು

  • ಅದ್ದೂರಿ – ವೈಭವ

  • ಅದ್ಭುತ – ಅತ್ಯಾಶ್ಚರ್ಯಕರ

  • ಅಧಃಪತನ – ಸರ್ವನಾಶ , ಕೆಳಗೆ ಬೀಳುವುದು.

  • ಅಧಿಪತಿ – ಒಡೆಯ, ನಾಯಕ.

  • ಅಧೋಗತಿ – ಅವನತಿ; ದುರ್ಗತಿ.  

  • ಅನಂತ – ಕೊನೆಯಿಲ್ಲದ

  • ಅನ್ವೇಷಣೆ – ಹುಡುಕು; ಶೋಧಿಸು. 

  • ಅನಘ್ರ್ಯ  –  ಶ್ರೇಷ್ಠ

  • ಅನರ್ಥ – ಅರ್ಥವಲ್ಲದ ಕೇಡು.

  • ಅನಾಚಾರ-ಕೆಟ್ಟ ನಡವಳಿಕೆ

  • ಅನಾಮತ್ತು-ಇಡಿಯಾಗಿ, ಪೂರ್ತಿಯಾಗಿ

  • ಅನಾರೋಗ್ಯ – ರೋಗದಿಂದ ನರಳುವುದು.

  • ಅನಾವರಣ-ಮರೆಯನ್ನು ಸರಿಸುವುದು

  • ಅನಾಹುತ – ಆಕಸ್ಮಿಕ ಕೇಡು , ತೊಂದರೆ, ಅಪಾಯ.

  • ಅನಿಮಿತ್ತ – ಕಾರಣವಿಲ್ಲದೆ

  • ಅನಿರ್ವಚನೀಯ – ಮಾತಲ್ಲಿ ವರ್ಣಿಸಲು ಸಾಧ್ಯವಾಗದ, ವರ್ಣಿಸಲು ಶಕ್ಯವಲ್ಲದ

  • ಅನಿವಾರ್ಯ- ಅತ್ಯಗತ್ಯ.

  • ಅನುಚರ-ಹಿಂಬಾಲಕ

  • ಅನುಪಮ – ಎಣೆಯಿಲ್ಲದ

  • ಅನುಮತ – ಸಮ್ಮತಿ

  • ಅನುರಾಗ – ಪ್ರೀತಿ, ಪ್ರೇಮ, ವಾತ್ಸಲ್ಯ

  • ಅನುರೂಪ – ಯೋಗ್ಯವಾದವನು  

  • ಅನುವಾಗು – ಸಿದ್ಧನಾಗು

  • ಅಪ್ಪಣೆ-ಅನುಮತಿ

  • ಅಪ್ಪರು – ರಕ್ಷಿಸುವವರು

  • ಅಪ್ಪಿ – ತಬ್ಬಿಕೊಂಡು, ಆಲಿಂಗನ ಮಾಡಿ.

  • ಅಪ್ರತಿಭ – ದಿಗ್ಭ್ರಮೆ

  • ಅಪ್ರತಿಮ – ಹೋಲಿಕೆಯಿಲ್ಲದ, ಸಾಟಿಯಿಲ್ಲದ

  • ಅಪರಿಪೂರ್ಣ – ಪೂರ್ಣವಲ್ಲದ   

  • ಅಪರಿಮಿತ – ಪರಿಮಿತವಲ್ಲದ, ಮಿತಿಯಿಲ್ಲದ

  • ಅಪೂರ್ವ – ಅಪರೂಪದ

  • ಅಭ್ಯಂತರ-ಅಡ್ಡಿ

  • ಅಭಯ – ರಕ್ಷಣೆ    

  • ಅಭಿರುಚಿ – ಆಸಕ್ತಿ ,  ಒಲವು.

  • ಅಭಿಲಾಷೆ – ಆಸೆ , ಬಯಕೆ.

  • ಅಭೀತೆಯಾಗು – ಹೆದರದಿರು

  • ಅಭೀಷ್ಟ- ಬಯಸಿದ್ದು

  • ಅಮರ – ಶಾಶ್ವತ

  • ಅಮಿತ – ಮಿತಿಯಿಲ್ಲದ

  • ಅಮೃತ – ಪವಿತ್ರವಾದುದು., ಹಾಲು

  • ಅರ್ಥಿ – ಬೇಡುವವನು 

  • ಅರಕಳಿ-ಕೊರತೆ

  • ಅರಘಳಿಗೆ – ಸ್ವಲ್ಪ ಹೊತ್ತು

  • ಅರಚು – ಜೋರಾಗಿ ಕೂಗು

  • ಅರಸ – ರಾಜ; ಶ್ರೇಷ್ಠ. 

  • ಅರಸಿ – ಹುಡುಕಿ

  • ಅರಸು – ಹುಡುಕು; ಶೋಧಿಸು.

  • ಅರಳು-ವಿಕಾಸವಾಗು

  • ಅರಿ – ತಿಳಿ ಗ್ರಹಿಸು.

  • ಅರಿವು – ತಿಳಿವಳಿಕೆ, ಜ್ಞಾನ ,ಪ್ರಜ್ಞೆ.  

  • ಅರಿವುಗೇಡಿ-ತಿಳಿಗೇಡಿ

  • ಅರಿವೆ – ಬಟ್ಟೆ; ವಸ್ತ್ರ. 

  • ಅರುಣೋದಯ – ಸೂರ್ಯೋದಯ

  • ಅರುಹು-ತಿಳಿಸು, ಹೇಳು

  • ಅಲಂಕೃತ – ಅಲಂಕಾರ ಮಾಡಿದ, ಸಿಂಗರಿಸಿದ.

  • ಅಲ್ಪ – ಕಡಿಮೆ

  • ಅಲೆ – ತೆರೆ

  • ಅವಕಾಶ – ಸಂದರ್ಭ, ಎಡೆ.

  • ಅವಘಡ – ತೊಂದರೆ

  • ಅವನಿ – ಭೂಮಿ 

  • ಅವನೀತಳ – ಭೂಮಂಡಲ

  • ಅವಮರ್ಯಾದೆ-ಅಪಮಾನ

  • ಅವಾಂತರ – ಗಡಿಬಿಡಿ

  • ಅವಾಕ್ಕಾಗು-ಆಶ್ಚರ್ಯಪಡು, ಮಾತಿಲ್ಲವಾಗು

  • ಅವಿನಾಭಾವ – ಒಂದಕ್ಕೊಂದು ಬಿಡದ

  • ಅವಿನಾಶಿ – ನಾಶವಿಲ್ಲದ್ದು  

  • ಅವಿಭಾಜ್ಯ-ಬೇರ್ಪಡಿಸಲಾಗದ

  • ಅಷ್ಟವಿಧ   –  ಎಂಟುಬಗೆಯ

  • ಅಸಹಕಾರ – ಸಹಕರಿಸದಿರುವುದು

  • ಅಸಹನೀಯ-ಸಹಿಸಲು ಸಾಧ್ಯವಿಲ್ಲದ, ತಡೆಯಲಾಗದ.

  • ಅಸಿ – ಖಡ್ಗ

  • ಅಸುರ   –   ರಾಕ್ಷಸ 

  • ಅಸೂಯೆ – ಹೊಟ್ಟೆಕಿಚ್ಚು

  • ಅಹೋರಾತ್ರಿ – ರಾತ್ರಿಪೂರ್ತಿ, ಇಡೀರಾತ್ರಿ

  • ಅಳಿಯಾಸೆ – ಕೀಳಾಸೆ ಈಡೇರದ ಆಸೆ

  • ಅಳಿಸು-ನಾಶಪಡಿಸು

  • ಆಕ್ರೋಶ – ಗರ್ಜನೆ, ಕೋಪಿಸುವಿಕೆ.

  • ಆಗ್ರಹ – ಬಲವಂತ , ಒತ್ತಾಯ.

  • ಆಘ್ರಾಣಿಸು-ವಾಸನೆ ನೋಡು

  • ಆಘಾತ – ಪೆಟ್ಟು; ಕೇಡು

  • ಆಚಾರ-ಒಳ್ಳೆಯ ನಡವಳಿಕೆ 

  • ಆಜ್ಞೆ – ಅಪ್ಪಣೆ

  • ಆಜುಬಾಜು-ಅಕ್ಕಪಕ್ಕನೆರೆಹೊರೆ

  • ಆಣತಿ – ಆಜ್ಞೆ   

  • ಆತಂಕ – ಭಯ, ಅಡ್ಡಿ, ತಳಮಳ, ಚಿಂತೆ

  • ಆದ್ಯ – ಮೊದಲ ಕರ್ತವ್ಯ

  • ಆದರ – ಪ್ರೀತಿ,  ಗೌರವ.  

  • ಆದಿ – ಮೊದಲು 

  • ಆನಂದಬಾಷ್ಪ – ಸಂತೋಷದ ಕಣ್ಣೀರು.  

  • ಆನು   –   ತಾಳು 

  • ಆಪ್ತ – ಆತ್ಮೀಯ,

  • ಆಪತ್ತು – ಅಪಾಯ

  • ಆಯಾಸ-ದಣಿವು

  • ಆರ್ತ – ಕಷ್ಟಕ್ಕೆ ಸಿಕ್ಕ, ದುಃಖಿತ.

  • ಆರ್ತ ಸ್ವರ – ನೋವಿನ ಧ್ವನಿ ಸಂಕಟದ ಧ್ವನಿ.

  • ಆಲಿಸು – ಮನಸ್ಸಿಟ್ಟು ಕೇಳು

  • ಆವಾಸ – ನೆಲೆ ಮನೆ

  • ಆಶ್ಚರ್ಯ – ವಿಸ್ಮಯ, ಬೆರಗು.

  • ಆಶಯ – ಆಸೆ ಇಂಗಿತ.

  • ಆಶೀರ್ವಾದ – ಹಾರೈಕೆ.

  • ಆಸ್ವಾದಿಸು – ರುಚಿ ನೋಡುವುದು

  • ಆಸರ – ಆಶ್ರಯ, ನೆಲೆ

  • ಆಹ್ಲಾದ-ಸಂತೋಷ, ಆನಂದ

  • ಆಹುತಿ – ಬಲಿ 

  • ಆಳು – ಸೇವಕ 

  • ಇಂಗಿತ – ಆಶಯ.

  • ಇಂಗು- ಬತ್ತು;  

  • ಇಂಚರ -ಇಂಪಾದ ಧ್ವನಿ

  • ಇಂಪು ಮಧುರ 

  • ಇಚ್ಛೆ-ಇಷ್ಟ

  • ಇನ-ಸೂರ್ಯ

  • ಇನಾಮು – ಬಹುಮಾನ

  • ಇಬ್ಬನಿ – ಮಂಜಿನ ಹನಿ

  • ಇರುಳುಗಣ್ಣು – ಕತ್ತಲಾದಂತೆ ಕಣ್ಣು ಕಾಣದಿರುವುದು

  • ಇರುಳು-ರಾತ್ರಿ 

  • ಇಳೆ – ಭೂಮಿ; ಧರೆ; ಪೃಥ್ವಿ.

  • ಈಟಿ – ಶೂಲ 

  • ಈಷ್ರ್ಯೆ – ಅಸೂಯೆ; ಹೊಟ್ಟೆಕಿಚ್ಚು. 

  • ಉಂಬು-ಊಟ ಮಾಡು

  • ಉಚಿತವಲ್ಲ-ಯೋಗ್ಯವಲ್ಲ

  • ಉಜ್ವಲ – ಪ್ರಕಾಶಮಾನ

  • ಉಣ್ಣೆ-ಕುರಿಯ ತುಪ್ಪಳ

  • ಉತ್ಕಂಠತೆ – ಉತ್ಸುಕತೆ

  • ಉತ್ಕಟ – ಅಧಿಕ; ಪ್ರಬಲವಾದ.

  • ಉತ್ತುಂಗ – ಎತ್ತರವಾದ; ಶ್ರೇಷ್ಠ

  • ಉತ್ಪ್ರೇಕ್ಷೆ – ಅಧಿಕವಾಗಿ ವರ್ಣಿಸುವುದು.

  • ಉದ್ಗರಿಸು-ಹೇಳು, ಹೊರಗೆಡಹು.

  • ಉದ್ಧಟ-ಒರಟ     

  • ಉದಯ / ಉದಯಿಸು – ಮೂಡು, ಹುಟ್ಟು

  • ಉದರ – ಹೊಟ್ಟೆ 

  • ಉದಾತ್ತ – ಶ್ರೇಷ್ಠ 

  • ಉದಾರ – ಧಾರಾಳ

  • ಉನ್ನತ-ಶ್ರೇಷ್ಠ

  • ಉಪದ್ವ್ಯಾಪ-ಕಿರುಕುಳ

  • ಉಪಾಯ – ಯುಕ್ತಿ

  • ಉಪಾಯನ  –  ಕಾಣಿಕೆ

  • ಉಪಾಸಕ – ಆರಾಧಕ ,  ಭಕ್ತ.

  • ಉಪೇಕ್ಷೆ – ಅಲಕ್ಷ್ಯ ಕಡೆಗಣಿಸುವಿಕೆ, ತಿರಸ್ಕಾರ

  • ಉಮ್ಮಳಿಸು – ದುಃಖ ಹೆಚ್ಚಾಗು

  • ಉರಗ – ಹಾವು 

  • ಉರಿ-ಸುಡು

  • ಉಲ್ಕೆ – ಆಕಾಶದಿಂದ ಭೂಮಿಗೆ ಬೀಳುವ  ತೇಜಃಪುಂಜವಾದ ಆಕಾಶಕಾಯ,

  • ಉಲ್ಲಂಘನೆಹಾರು; ದಾಟು.

  • ಉಷ್ಣ – ಬಿಸಿ

  • ಉಷೆ – ಅರುಣೋದಯ

  • ಉಸಿರಬೇಕು – ಹೇಳಬೇಕು

  • ಊಟೆ – ನೀರಿನ ಚಿಲುಮೆ,  ನೀರಿನ ಬುಗ್ಗೆ.

  • ಊರ್ಜಿತ-ರೂಢಿಯಲ್ಲಿರು

  • ಊರುಗೋಲು – ಹುಟ್ಟು (ದೋಣಿ ನಡೆಸುವ ಸಾಧನ)

  • ಋಣ – ಸಾಲ; ಹಂಗು.

  • ಎದೆಗುಂದು-ಅಧೀರನಾಗು, ಹೆದರು

  • ಎನಿತು-ಎಷ್ಟು

  • ಎರಗು – ನಮಸ್ಕರಿಸು; ಮೇಲೆ ಬೀಳು

  • ಎರವಲು-ಸಾಲ

  • ಎವೆಯಿಕ್ಕದೆ -ಕಣ್ಣು ಮಿಟುಕಿಸದೆ ನೋಡುವುದು.

  • ಎಳನಾಗರಕಾಯಿ – ಹುಣಿಸೆ ಹೂವುಗಳು

  • ಎಳೆಯವ – ಚಿಕ್ಕವ, ಸಣ್ಣವ.

  • ಏಕತಾನತೆ – ಒಂದೇ ರೀತಿಯ

  • ಏಕಾಗ್ರತೆ – ತದೇಕಚಿತ್ತತೆ.

  • ಏಳ್ಗೆ-ಅಭಿವೃದ್ಧಿ , ಉನ್ನತಿ.

  • ಐಕಮತ್ಯ – ಏಕಾಭಿಪ್ರಾಯ ಒಗ್ಗಟ್ಟು

  • ಐತಿ – ಇದೆ, ಇರುವುದು.

  • ಐಭೋಗ – ವೈಭವ, ಸುಖ

  • ಒಡ್ಡೋಲಗ-ರಾಜಸಭೆ, ದರ್ಬಾರು.

  • ಒಡಲ್ – ಶರೀರ, ದೇಹ

  • ಒಡೆ – ಬಿರಿ; ಬಿಚ್ಚು.

  • ಒಪ್ಪಂದ – ಕರಾರು

  • ಒಮ್ಮತ-ಒಂದೇ ಅಭಿಪ್ರಾಯ

  • ಒರತೆ – ನೀರು ಜಿನುಗುವ ತಗ್ಗು.

  • ಒರೆದ-ಹೇಳಿದ

  • ಒಲ್ಲೆ – ಬೇಡ

  • ಒಲಿಸು – ಮನವೊಪ್ಪಿಸು

  • ಒಲುಮೆ – ಪ್ರೀತಿ

  • ಒಳ್ದಾರಿ – ಒಳ್ಳೆಯ ದಾರಿ

  • ಓಟಕೀಳು – ಜೋರಾಗಿ ಓಡು

  • ಓರಣ-ಅಚ್ಚುಕಟ್ಟಾಗಿರುವುದು

  • ಓಲೆ – ತಾಳೆಮರದ ಗರಿಯ ಹಾಳೆ,  ಕಾಗದ, ಪತ್ರ

  • ಔದಾರ್ಯ – ಉದಾರತೆ